Monday, August 30, 2010

ನೀರು...

ಹನಿ ಹನಿ ಸುರಿದು ಮಳೆಯಾಗಿ ನೀರ ಸೆಲೆ ಉಕ್ಕಿ ಭುವಿಯೊಳು ನಲಿದಾಡಿ ನದಿಯಾಗಿ ನುಲಿದು ಅಲೆದು ಅಲೆ ಅಲೆಯಾಗಿ ನಲಿಯುವ ಸಾಗರದ ತೆರೆಗಳೊಳಗೆ ಸೇರಿ ರವಿಯ ಹರವಿನ ಕಿರಣಗಳೊಳು ಸುಳಿದು ಮುಗಿಲ ಮೇಲೇರಿ ಮೆಲ್ಲನೆ ಮಿಂಚುವ ಬೆಳಕಾಗಿ ಭಯವೀಯುವ ಗುಡುಗಾಗಿ ಸಿಡಿಲು ಜೋರಾಗಿ ಮತ್ತೆ ಮೆಲ್ಲನೆ ಧರೆಗಿಳಿಯುವ ಹುಚ್ಚು ನಿನಗೆ !!

5 comments:

  1. ಪ್ರಕೃತಿಯ ಸಹಜ ಸ್ವಭಾವ ಅದಲ್ಲವೆ? ನಿರೂಪಣೆ ಚೆ೦ದವಿದೆ.

    ಅನ೦ತ್

    ReplyDelete
  2. ಹೌದಲ್ವೆ..

    ಬಿಡದ ಹುಚ್ಚು.. ಸ್ವಲ್ಪ ರೊಚ್ಚು..
    ನೀರ ಹುಚ್ಚು..ಕ್ಶಣದಿ ನುಚ್ಚು..[ ಕೆಲವೊಮ್ಮೆ]

    ಚ೦ದದ ಭಾವ

    ReplyDelete
  3. ಮೂವರೂ ಸಹೃದಯಿಗಳಿಗೆ ಧನ್ಯವಾದಗಳು :)

    ReplyDelete
  4. Beautifullll lines.. !!
    Thank u.. ji...

    ReplyDelete