Monday, August 30, 2010

ನೀರು...

ಹನಿ ಹನಿ ಸುರಿದು ಮಳೆಯಾಗಿ ನೀರ ಸೆಲೆ ಉಕ್ಕಿ ಭುವಿಯೊಳು ನಲಿದಾಡಿ ನದಿಯಾಗಿ ನುಲಿದು ಅಲೆದು ಅಲೆ ಅಲೆಯಾಗಿ ನಲಿಯುವ ಸಾಗರದ ತೆರೆಗಳೊಳಗೆ ಸೇರಿ ರವಿಯ ಹರವಿನ ಕಿರಣಗಳೊಳು ಸುಳಿದು ಮುಗಿಲ ಮೇಲೇರಿ ಮೆಲ್ಲನೆ ಮಿಂಚುವ ಬೆಳಕಾಗಿ ಭಯವೀಯುವ ಗುಡುಗಾಗಿ ಸಿಡಿಲು ಜೋರಾಗಿ ಮತ್ತೆ ಮೆಲ್ಲನೆ ಧರೆಗಿಳಿಯುವ ಹುಚ್ಚು ನಿನಗೆ !!